ಅಡ್ಡ ಹೆಸರಿನ ಶಬ್ದ ಕೋಶ : ಹತ್ತರಾಣವರ ದಿನಿಗೆಳುವ ಹವ್ಯಕ ಶಬ್ದ ಸಂಗ್ರಹ

ನಮ್ಮ ಜೀವನಲ್ಲಿ ಸುಮಾರು ಸಂಬಂಧಿಕರ, ನೆರೆಕರೆಯವರ ಹತ್ತರಾಣವರ ಬೆರೆತ್ತು. ಎಲ್ಲೋರಿಂಗೂ ಒಂದೊಂದು ಹೆಸರಿರ್ತು ನಾಮಕರಣ ದಿನ ಮಡುಗಿದ್ದು- ಆದರೂ ನಾವು ಪ್ರೀತಿಂದಲೋ, ಕೊಂಗಾಟಂದಲೋ ಒಂದು ಮುದ್ದು ಹೆಸರು ಮಡಗಿ ಅದರ್ಲೆ ದಿನಿಗೆಳ್ತು. ಅದಕ್ಕೆ ವಿಶೇಷ ಎಂತ ಅರ್ಥ ಇರದ್ರೂ, ಕೊಂಞೆ ಶಬ್ದ ಆಗಿದ್ದರೂ, ಅದು ಒಂದು ರೂಢಿಲಿ ಬಂದು ಬಿಡ್ತು. ಕೆಲವು ಸರ್ತಿ ಅವನ ನಿಜ ಹೆಸರು ಬಳಕೆಗೇ ಬಾರದ್ದಷ್ಟುದೇ ಅಡ್ಡ ಹೆಸರು ಪ್ರಸಿದ್ಧ ಆಗಿ ಹೋವುತ್ತು.

ಇದಾ, ಮೊನ್ನೆ ಒಂದರಿ ಕರೆಂಟಿನವು ಕೆಳಾಣ ಬೈಲಿಂಗೆ ಬಂದು ’ಇಲ್ಲಿ ಗಣೇಶ್ ಭಟ್ರ ಮನೆ ಎಲ್ಲಿ?’ ಹೇಳಿ ಕೇಳಿದವು, 'ಇಲ್ಲಿ ಆ ಹೆಸ್ರಿನವು ಯಾರೂ ಇಲ್ಲಲ್ವೋ ..!' ಹೇಳಿದವಡ ಸುರುವಿಂಗೆ. ಮತ್ತುದೇ ವಿವರ ಕೇಳುವಗ ಗೊಂತಾತು, ಅವು ಹೇಳಿಗೊಂಡಿಪ್ಪದು ನಮ್ಮ ಪಾರೆ ಮಗುಮಾವ°ನ ಮನೆ ಹೇಳಿ. ಅವರ ಹತ್ತರಾಣೋರು ಎಲ್ಲರು ಮಗುಅಪ್ಪಚ್ಚಿ, ಮಗುಮಾವ° ಹೇಳುಗು, ಬೈಲಿಲಿ ಅವಕ್ಕೆ ಇನ್ನೊಂದು ಹೆಸರು ಗೆಣವತಿ ಹೇಳಿ. ’ಗಣೇಶ ಭಟ್ಟ’ ಹೇಳಿ- ಶಾಲೆಲಿ, ಕಾರ್ಡಿಲಿ ಎಲ್ಲ ಇಪ್ಪದು. :-)

ಅಡ್ಡ ಹೆಸರು ಹೇಳಿರೆ ಸಾಮಾನ್ಯವಾಗಿ 3 ನಮೂನೆ.
* ಸಾಮಾನ್ಯ (General) ಆಗಿ ಇಪ್ಪ ಕೆಲವು ಕೊಂಗಾಟದ ಶಬ್ದಂಗಳಲ್ಲಿ ಒಂದು. (ಮಾಣಿ, ಒಪ್ಪ ಕುಂಞ - ಇತ್ಯಾದಿ ) ಮನೆಗಳಲ್ಲಿ ಅಜ್ಜನ ಹೆಸರು ಪುಳ್ಳಿಗೆ ಮಡುಗ್ಗು (ನಾವು ಮೊನ್ನೆ ಈ ವಿಷಯ ಮಾತಾಡಿದ್ದು, ಮರದ್ದಿಲ್ಲೆನ್ನೆ!) ಹಾಂಗೆ ಅಜ್ಜನ ಹೆಸರು ಮಡಗಿರೆ, ಅಜ್ಜಿಗೆ ದಿನಿಗೆಳುಲೇ ಗೊಂತಿಲ್ಲೆ ಇದಾ, ಅದಕ್ಕೆ ಕೊಂಗಾಟಲ್ಲಿ ಹೀಂಗೆ ಎಂತಾರು ದಿನಿಗೆಳುದು.
* ಇನ್ನೊಂದು, ಒಬ್ಬನ ಹೆಸರನ್ನೇ ರಜ್ಜ ಕೊಂಞೆ ಮಾಡಿ ಹೇಳುದು. (ಕೇಶವ ಹೆಸರಿದ್ದರೆ ಕೇಚ° ಹೇಳಿ) ಇದಕ್ಕೆ ಸಂಬಂಧವ ಸೇರ್ಸಿ ಬಾರಿ ಚೆಂದದ ಒಂದು ರೂಡನಾಮ ಮಾಡ್ತವು ಅಜ್ಜಿಯಕ್ಕೊ. :-)
* ಕೆಲವು ಸರ್ತಿ ಇದೆರಡೂ ಅಲ್ಲದ್ದೆ, ಹತ್ತರಾಣ ಹೆಸರು ಅಡ್ಡ ಹೆಸರಾವುತ್ತು!
ಹೊಸ ನಮೂನೆ ಹೆಸರುಗಳಲ್ಲಿ ಇದು ಜಾಸ್ತಿ.
ನೆಡುಬೈಲು ವಿಷ್ಣು ಬಟ್ರ ಪುಳ್ಳಿ ವಿಷ್ಣುಪ್ರಸಾದ ಇದ್ದ° ಅಲ್ದಾ? ಆಚಕರೆ ಮಾಣಿಯಯ ಅಜ್ಜನ ಮನೆ ಬಾವ°, ಅವನ ಪ್ರಶಾಂತ° ಹೇಳಿ ದಿನಿಗೆಳುಗು. ದರ್ಕಾಸು ಮನೆ ಸಾವಿತ್ರಿಯ ಸವಿತ° ಹೇಳಿ ಹೇಳುಗು ಮನೆಲಿ. ಎಡಪ್ಪಾಡಿ ಬಾವ°ನಿಜ ಹೆಸರಂತೂ ಅವರ ಮನೆಯವಕ್ಕೇ ಮರದ್ದೋ ಏನೋ. :-)

ನಿಜವಾದ ಹೆಸರು ಬಳಕೆಲೇ ಇಲ್ಲದ್ದೆ, ಮಗುಅಪ್ಪಚ್ಚಿ, ಒಪ್ಪಣ್ಣ, ಮಾಣಿ ಭಾವ, ಮೋಳು ಚಿಕ್ಕಮ್ಮ, ಕಾಂಬು ಅಜ್ಜಿ, ಸುಬ್ಬಿ ಅತ್ತೆ ಹಾಂಗಿಪ್ಪವು ಎಲ್ಲ ಎಷ್ಟು ಮನೆಮಾತು ಆಯಿದವು, ಅಲ್ಲದೋ?

(ಪ್ರತಿ ಅಡ್ಡ ಹೆಸರಿಂಗೂ ಸಂಬಂಧ ಸೇರ್ಸಿಗೊಳ್ಳಿ. ಉದಾ :'ದೊಡ್ಡ' ಕ್ಕೆ ದೊಡ್ಡಮಾವ, ದೊಡ್ಡಪ್ಪಚ್ಚಿ, ದೊಡ್ಡತ್ತೆ, ದೊಡ್ಡಕ್ಕ ಇತ್ಯಾದಿ... )

೧. 'ಮೂಲ' (ಹೆಸರಿಂಗೆ ಸಂಬಂಧ ಇಲ್ಲದ್ದ ) , ಸಾಮಾನ್ಯ (General) ಆಗಿ ಇಪ್ಪ ಕೆಲವು ಕೊಂಗಾಟದ ಶಬ್ದಂಗಳ ಅಡ್ಡ ಹೆಸರುಗಳ ಸಂಗ್ರಹ:


ಅಬ್ಬು
ಅಬ್ಬೆ
ಒಪ್ಪ
ಒಪ್ಪಕುಞ / ಒಪ್ಪೋಞ


ಕುಂಞಿ
ಕೂಸು / ಕೂಚು
ಗೋಪಿ : ಗೋಪಾಲ ಕೃಷ್ಣ

ಚುಬ್ಬಿ
ಚುಬ್ಬ


~


ತಂಗು
ತಮ್ಮ
ದೊಡ್ಡ


ಪುಟ್ಟ
ಪೋಕ
ಬಿಲಿಯ
ಮಾಣಿ
ಮೋಳು
ಮುದ್ದು
ಮುದ್ದ
ಮೋನು
ಮಿನಿಯ


ಸುಬ್ಬ
ಸಣ್ಣ

೨. ಇನ್ನು ಹೆಸರಿಂಗೆ ಸಂಬಂಧಿತವಾದ ಕೆಲವು ಅಡ್ಡ ಹೆಸರುಗೊ ಬೇರೆ. ಅದರಲ್ಲಿ ವಿಶೇಷ ಗಮನ ಸೇಳವದು ಇಲ್ಲಿ ಕೆಲವು:


ಈಚ : ಈಶ್ವರಣ್ಣ / ಈಶ್ವರಿ (ಈಚಕ್ಕ , ಈಚಣ್ಣ, ಈಚಪ್ಪಚ್ಚಿ ಇತ್ಯಾದಿ )
ಉದ್ದ : ಉದಯಣ್ಣ
ಎಂಕಪ್ಪ : ವೆಂಕಪ್ಪ ಭಟ್ರು


ಕಿಟ್ಟಣ್ಣ : ಕೃಷ್ಣಣ್ಣ
ಕೇಚಣ್ಣ : ಕೇಶವಣ್ಣ
ಕಾಂಬು : ಮೂಕಂಬಿಕಾ
ಗೆಣವತಿ: ಗಣಪತಿ ಭಟ್ರು


ಚಿದ್ದ / ಚಿನ್ನ :ಚಿದಾನಂದಣ್ಣ
ಚೀಟ : ಶ್ರೀಕೃಷ್ಣ (ಹೊಸ ಶೈಲಿ: ಶೀಕಿ)
ಚುಬ್ಬಣ್ಣ : ಸುಬ್ರಮಣ್ಯ ಭಟ್ರು


~


ನಾಗು : ನಾಗವೇಣಿ
ನಾಣ: ನಾರಾಯಣಣ್ಣ


ಪಮ್ಮೇಚ: ಪರಮೇಶ್ವರಣ್ಣ
ಪಾಚಿ : ಪಾರ್ವತಿ
ಮೇಚ: ಮಹೇಶಣ್ಣ
ಮಾಲಿಂಗ/ಮಾಂಗಪ್ಪ :ಮಹಾಲಿಂಗಣ್ಣ
ಮೋನ: ಮೋಹನಣ್ಣ


ಲಚ್ಚು: ಲಕ್ಷ್ಮಿ
ವಿಜಿ : ವಿಜಯಕ್ಕ
ವೆಂಕಪ್ಪ : ವೆಂಕಟ್ರಮಣ
ಸಂಕಣ್ಣ / ಸಂಕಪ್ಪಣ್ಣ : ಶಂಕರ
ಶೀನ : ಶ್ರೀನಿವಾಸ
ಶಂಬು : ಶಂಭಟ್ಟ / ಶ್ಯಾಮ ಭಟ್ಟ
ಸರಸು : ಸರಸ್ವತಿ
ಸವಿತ : ಸಾವಿತ್ರಿ
ಸಾತು : ಸಾವಿತ್ರಿ

ಬಿಟ್ಟು ಹೋದ ಹಳೆ ಹೆಸರುಗಳ ಕೂಡ್ಲೇ ತಿಳುಸಿ, ಸೇರ್ಸಿಗೊಳ್ತೆ ಆತ?

ಹೊಸ ಹೆಸರುಗೊ ಬಂದ ಮತ್ತೆ ಎಲ್ಲ ಬದಲಾಯಿದು ಬಾವ. ಉದಾ: ಈಚಕರೆ ಶ್ರೀಕೃಷ್ಣಣ್ಣ ಭಟ್ರ ಎಲ್ಲರು ಚೀಟಣ್ಣ / ಚೀಟಮಾವ° ಹೇಳಿ ದಿನಿಗೆಳುಗು. ಅವರ ಪುಳ್ಳಿ ಶೈಲೇಶ್ ಶ್ರೀ ಕೃಷ್ಣ ಇದ್ದ ಅಲ್ದಾ, ಅವನ ಎಲ್ಲಾರು ಶೀಕಿ ಹೇಳುದು. ಹೆಸರು ಹೊಸತ್ತು ಆದ ಹಾಂಗೆ, ಅಡ್ಡ ಹೆಸರುದೆ ಹೊಸತ್ತಾವುತ್ತು.

ಒಂದೊಪ್ಪ: ಅಡ್ಡ ಹೆಸರಿಲಿ ಪ್ರಸಿದ್ಧ ಆದರೂ, ಅಡ್ಡ ದಾರೀಲಿ ಪ್ರಸಿದ್ಧ ಅಪ್ಪಲೇ ಬಿಡೆಡಿ ಬಾವ, ಆರನ್ನೂ.