ಅಬ್ಬೆ-ಅಪ್ಪ° - ಸಮಾಜದ ಮೂರ್ತರೂಪ.

ಒಂಬತ್ತು ತಿಂಗಳು ಹೊತ್ತು- ಹೆತ್ತು, ಮತ್ತೆ ಒಂಬತ್ತು ತಿಂಗಳು ಹೊತ್ತು- ಬೆಳೆಷಿ, ಅಪ್ಪನ ಕೈಲಿ ಮಡಗುತ್ತು ಬಾಬೆಯ ಅಬ್ಬೆ. ಮತ್ತೆ ಒಬತ್ತು ತಿಂಗಳಿಲಿ ಗುರ್ತ ಹಿಡಿವಲೆ ಎಲ್ಲ ಸುರು ಮಾಡ್ತು ಆ ಬಾಬೆ.ಗುರ್ತ ಹಿಡಿವ ಆ ಒಂಬತ್ತು ತಿಂಗಳಿಲಿ ಅದರ ಕಣ್ಣಿಂಗೆ ಸರಾಗ ಕಾಂಬದು ಅಪ್ಪ°, ಮತ್ತೆ ಅಬ್ಬೆ, ಇಬ್ರೇ.
ಅಲ್ಲಿಂದಲೇ ಅದರ ಕಲಿಯುವಿಕೆ ಆರಂಭ. ಮುಂದೆ ಸಿಕ್ಕುವ ಸಮಾಜದ ಎಲ್ಲ ವ್ಯಕ್ತಿತ್ವಂಗಳ ಪರಿಚಯ.
ಮನೆಲಿ ಅಬ್ಬೆ ಅಪ್ಪನ ಹೇಂಗೆ ನೋಡಿಗೋಳ್ತೋ, ಹಾಂಗೆ ಆ ಬಾಬೆಯೂ ಅಪ್ಪನ ಕಾಂಬಲೆ ಸುರು ಮಾಡ್ತು, ನಿಂಗೊ-ನಿಂಗೊ ಹೇಳಿ ದಿನಿಗೆಳುದು, ಬಹುವಚನಲ್ಲಿ ಮಾತಾಡುದು, ಗೌರವಲ್ಲಿ ನಡಕ್ಕೊಂಬದು - ಇತ್ಯಾದಿ.ಹಾಂಗೆಯೇ , ಅಬ್ಬೆಯ ಅಪ್ಪ ಹೇಂಗೆ ನೋಡಿಗೊಳ್ತಾವೋ,ಬಾಬೆಯೂ ಅಬ್ಬೆಯ ಹಾಂಗೆ ಕಾಂಬಲೆ ಸುರು ಮಾಡ್ತು. ಪ್ರೀತಿಲಿ, ನೀನು ನೀನು ಹೇಳಿ ಏಕವಚನಲ್ಲಿ ದಿನಿಗೆಳಿಗೊಂಡು, ಪ್ರೀತಿಲಿ ಮಾತಾಡಿಗೊಂಡು...
ಅಮ್ಮ- ಪ್ರೀತಿ ಮತ್ತೆ ನಂಬಿಕೆಯ ಸಂಕೇತ ಆಗಿ ಕಾಣ್ತು. ಅಪ್ಪ° - ಗೌರವ ಮತ್ತೆ ಭಯದ ಸಂಕೇತ ಆಗಿ ಕಾಣುತ್ತು.

ಅಂಬಗಳೇ, ಆ ಬಾಬೆ ಆರೆಲ್ಲ ಕಾಣ್ತೋ,ಅಪ್ಪಚ್ಚಿ, ದೊಡ್ಡಮ್ಮ, ಅಜ್ಜಿ, ಮಾವ, ಹೀಂಗೆ ಎಲ್ಲೋರನ್ನೂ ಈ ೨ ಗುಂಪುಗಳಲ್ಲಿ ಕಾಂಬಲೆ ಸುರು ಮಾಡುತ್ತು. ಅಪ್ಪನ ಹಾಂಗೆ ಗೌರವ- ಭಕ್ತಿ, ಅಲ್ಲದ್ರೆ ಅಬ್ಬೆಯ ಹಾಂಗೆ ನಂಬಿಕೆ-ಪ್ರೀತಿ.
ಮುಂದೆ ಸಿಕ್ಕುವ ಎಲ್ಲ ವ್ಯಕ್ತಿತ್ವಲ್ಲಿಯುದೆ ಮೊದಾಲು ಹುಡುಕ್ಕುದು ಈ ೪ ರಲ್ಲಿ ಯಾವುದು ಇದ್ದು ಹೇಳಿ. ಗುರು ಆದರೆ ಭಕ್ತಿ,ಹಿರಿಯವು ಆದರೆ ಗೌರವ , ಚೆಂಙಾಯಿ ಆದರೆ ನಂಬಿಕೆ, ಹೆಂಡತ್ತಿ ಆದರೆ ಪ್ರೀತಿ, ಇತ್ಯಾದಿ ಇತ್ಯಾದಿ.
ಅಪ್ಪ,ಅಬ್ಬೆ ಇವೆರಡರಲ್ಲಿ ಯಾವದು ಸರಿ ಇಲ್ಲದ್ರೂ ಬಾಬೆಗೆ ಸಮಾಜವ ಅರ್ಥ ಮಾಡಿಗೊಂಬಲೆ ಎಡಿಯಲೇ ಎಡಿಯ.

ಅದಕ್ಕೆ ಹೇಳುದು, ಅಪ್ಪಮ್ಮ ಹೇಳಿರೆ, ಮುಂದೆ ಸಿಕ್ಕುವ ಸಮಾಜದ ಮೂರ್ತರೂಪ (Preview) ಹೇಳಿ.

ಒಂದೊಪ್ಪ: ನಿಂಗಳ ಬಾಬೆಯ ಎದುರು ನಾಯಿ-ಪುಚ್ಚೆ ಜಗಳ ಮಾಡಿಕ್ಕೆಡಿ ಆತೋ?