ಮಾಣಿ ಒಬ್ಬಂಗೆ ಉದಾಸ್ನ/ ಬೇಜಾರ ಅಪ್ಪದಕ್ಕೆ ಕೂಸಿನ ಪದ್ಯ:
(ತಪ್ಪಿದ್ದರೆ ಕೂಡಲೇ ತಿಳಿಸಿ :-) )
ಎಂಗಳ ಕೂಸು ಶಾಲೆಗೆ ಹೊವುತ್ತು ಎಂತ ಬತ್ತಿಲ್ಲೆ!
ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !!
ಮೋರೆಲಿ ಬಂದ ಮುದ್ದಣು ನೋಡಿರೆ ಪಿಸುರೇ ಇಲಿತ್ತಿಲ್ಲೇ!
ಗಂಟೆಗಟ್ಲೆ ಪಾಲಿಶ್ ಮಾಡ್ತು ಉಗುರೇ ತೆಗೆತ್ತಿಲ್ಲೆ!!
ಹಂಡೆ ಗಟ್ಲೆ ಮಿಂದರೂ ಅದಕ್ಕೆ ಸಾಕೇ ಆವ್ತಿಲ್ಲೇ!
ಕನ್ನಟಿ ಎದುರಿನ ಪೌಡರು ಕುಪ್ಪಿ ಮುಗುದರೂ ಬಿಡ್ತಿಲ್ಲೇ!! ಎಂಗಳ ಕೂಸು !!
ಇರುಳಿಡಿ ಕೂದು ಟೀವಿ ನೋಡ್ತು ಒರಕ್ಕೆ ಬತ್ತಿಲ್ಲೆ !
ಎಲ್ರಾಂ ಬಡಿವಗ ಏಳುಲೆ ಮಾಂತ್ರ ಒರಕ್ಕೆ ಬಿಡ್ತಿಲ್ಲೇ!! ಎಂಗಳ ಕೂಸು !!
ಕಲಿವಲೆ ಹೋದ ಫ್ರೆಂಡಿನ ಮನೆಂದ ಬೇಗ ಬತ್ತಿಲ್ಲೆ !
ಓದಲೆ ಹೇಳಿರೆ ಮಾಂತ್ರ ಅದಕ್ಕೆ ಸಮಾದಾನ ಅವ್ತಿಲ್ಲೇ!! ಎಂಗಳ ಕೂಸು !!
ವಾರಕ್ಕೊಂದರಿ ಟೂರು ಹೋವುತ್ತು , ಎಲ್ಲಿಗೊ - ಗೊಂತಿಲ್ಲೇ!
ಜೀನ್ಸು ಪೂರ ಮಣ್ಣು ಮಾಡ್ತು ತೊಳದರೂ ಹೋವ್ತಿಲ್ಲೇ!! ಎಂಗಳ ಕೂಸು !!
ಎಂಗಳ ಕೂಸು ಶಾಲೆಗೆ ಹೊವುತ್ತು ಎಂತ ಬತ್ತಿಲ್ಲೆ!
ಅಟ್ಟಕ್ಕ್ ಹೋಗಿ ಫೋನು ಮಾಡ್ತು ಅಮ್ಮಂಗೊಂತಿಲ್ಲೆ !!
ಅಮ್ಮಂಗೊಂತಿಲ್ಲೆ !
ಗೊಂತಿಲ್ಲೇ!!
ಇಲ್ಲೇ!!!