ಎಂಗಳ ಮಾಣಿ ಶಾಲೆಗೆ ಹೊವ್ತ ಎಂತ ಬತ್ತಿಲ್ಲೆ :

ಸಣ್ಣ ಇಪ್ಪಗ ಕೇಳಿದ ಪದ್ಯ, ದೊಡ್ಡ ಆದಮತ್ತೆ ಸಣ್ಣವು ಕಳ್ಸಿಕೊಟ್ಟ ಪದ್ಯ:

ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!
ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!!

ಹಂಡೆ ಹಂಡೆ ನೀರು ಮುಗಿತ್ತು ಮಿಂದೇ ಆವ್ತಿಲ್ಲೆ!
ಬಾರು ಬಾರು ಸೋಪು ಮುಗಿತ್ತು ಕೆಸರೇ ಹೋವ್ತಿಲ್ಲೆ!! ಎಂಗಳ ಮಾಣಿ !!

ಅಟ್ಟಿ ಅಟ್ಟಿ ಪುಸ್ತಕ ತಂದು ಮನೆಲಿ ಮಡುಗುತ್ತಾ!
ಅಪ್ಪ ಎಲ್ಲ ಪರೀಕ್ಷೆಲಿದೆ ಸೊನ್ನೆ ತೆಗೆತ್ತಾ!! ಎಂಗಳ ಮಾಣಿ !!

ಇರುಳು ಇಡೀ ಮನಿಕ್ಕೊಂಡಿರ್ತ ವರಕ್ಕೇ ಬತ್ತಿಲ್ಲೇ!
ಶಾಲೆ ಕೆಲಸ ಮಾಡ್ಲೆ ಅವಂಗೆ ಪುರುಸೊತ್ತಿರ್ತಿಲ್ಲೇ||

ಎಂಗಳ ಮಾಣಿ ಶಾಲೆಗೆ ಹೋವ್ತ ಎಂತ ಬತ್ತಿಲ್ಲೆ!
ತೋಟಕ್ಕ್-ಹೋಗಿ ಬೀಡಿ ಎಳೆತ್ತ ಅಪ್ಪಂಗೊಂತಿಲ್ಲೆ!!
ಅಪ್ಪಂಗೊಂತಿಲ್ಲೇ!
ಗೊಂತಿಲ್ಲೇ!!
ಇಲ್ಲೇ!!!