ಮತ್ತೊಂದರಿ ಬರೆಕಕ್ಕಾ 'ಬಾಲ್ಯವಿವಾಹ'?

ಒಪ್ಪಣ್ಣ ಯೇವತ್ತುದೇ ಕುಶಾಲೇ ಮಾತಾಡುದು ಹೇಳಿ ಏನೂ ಇಲ್ಲೆ.
ಕೆಲಾವು ಸರ್ತಿ ಗಾತಿ(ಗಂಭೀರ) ಮಾತಾಡುದೂ ಇದ್ದು. ಈ ಶುದ್ದಿ ಇದ್ದಲ್ದಾ, ಇದರ ಓದುತ್ತಾ ಹೋಗಿ, ಅಷ್ಟಪ್ಪಗ ಇದರ ಗಂಭೀರತೆ, ಅನಿವಾರ್ಯತೆ ಅರ್ತ ಅಕ್ಕು ನಿಂಗೊಗೇ!

ಓ ಮೊನ್ನೆ ಎಂಗೊ- ಕೆಲವೆಲ್ಲ ಚೆಂಙಾಯಿಗೊ ಸೇರಿ ಚೆರಪ್ಪುವಗ, ಆಚಕರೆಮಾಣಿ ಅವನ ನೆಂಟ್ರ ಪೈಕಿ ಒಂದು ಕೂಸಿನ ಶುದ್ದಿ ಹೇಳಿದ°. ರಜರಜ ಗೊಂತಿದ್ದರೂ, ಕೆಲವೆಲ್ಲ ಹೊಸವಿಷಯ ಬಂತು. ಕೇಳಿ ಬೇಜಾರಾತು. ನಿಂಗೊಗೂ ಬೇಜಾರಾವುತ್ತೋ ಏನೋ!

ಅದರ ಮನೆ ವಿಟ್ಳ ಸೀಮೆಲಿ ಎಲ್ಲಿಯೋ ಆಡ. ಬಾರೀ ಉಶಾರಿ ಅಡ, ಚೆಂದವುದೇ ಅಡ. ಸಣ್ಣ ಇಪ್ಪಗಳೇ!
ಸಂಗೀತವೋ, ಬರತನಾಟ್ಯವೋ, ಬಾಷಣ- ಪ್ರಬಂದವೋ, ಹೀಂಗೆ ಎಲ್ಲದಕ್ಕೂ ಸೇರುಗು. ಮಾತಾಡ್ಳೆ ಬಾರೀ ಚುರ್ಕಡ!
ಅಂದು ನೋಡಿ ಗೊಂತಿದ್ದು, ಈಗ ಕೊಡೆಯಾಲಕ್ಕೋ, ಪುತ್ತೂರಿಂಗೋ - ಸರೀ ಗೊಂತಿಲ್ಲೆ ಇವಂಗೆ, ಕೋಲೇಜಿಂಗೆ ಹೋಯ್ಕೊಂಡಿತ್ತಡ. ಈ ಒರಿಷಕ್ಕೆ ಕೋಲೇಜು ಮುಗಿತ್ತಡ.


ಹೇಂಗೂ ಇದು ಅಕೇರಿ ಒರಿಷ ಅಲ್ದಾ, ಹಾಂಗೆ ಕೂಸಿಂಗೆ ಮನೆ ನೋಡ್ಳೆ(ಮದುವೆ ಸಂಬಂದ) ಸುರುಮಾಡಿದವಡ.
’ಒಳ್ಳೆ ಮನೆ ಬಂದರೆ ದಾರೆ ಎರದು ಕೊಡುದು’ ಹೇಳಿ ಯೇರ್ಪಾಡು ಮಾಡಿಗೊಂಡು ಇತ್ತಿದ್ದವು ಮಾವ°. (ಕೂಸಿನ ಅಪ್ಪ ಅಲ್ದಾ, ಬೇರೆ ಸಂಬಂದ ಹೊಳೆತ್ತಿಲ್ಲೆ, ಪಕ್ಕನೆ ಮಾವ° ಹೇಳಿ ಬಪ್ಪದಿದಾ!!!) ಸುಮಾರು ಬಂದದರ ಎಲ್ಲ ಬಿಟ್ಟವಡ, "ನಮ್ಮ ಮನೆತನಕ್ಕೆ ಸರಿ ಸೇರಿ ಬತ್ತಿಲ್ಲೆ" ಹೇಳಿಗೊಂಡು. ಸಾದಾರ್ಣದ್ದೆಲ್ಲ ಬಂದರೆ 'ಕೂಸಿಂಗೆ ಹಿತ ಆವುತ್ತಿಲ್ಲೆ', 'ಕೂಸು ಒಪ್ಪಿತ್ತಿಲ್ಲೆ', 'ಬೆಂಗ್ಳೂರೇ ಆಯೆಕ್ಕಡ', 'ಕಂಪ್ಯೂಟರು (ಇಂಜಿನಿಯರು) ಆಯೆಕ್ಕಡ', 'ಮಾಣಿಗೆ ಅಪ್ಪಮ್ಮ(ಒಟ್ಟಿಂಗೆ) ಇಪ್ಪಲಾಗಡ' - ಹೇಳುಗಡ ಕೂಸಿನ ಅಮ್ಮ. ತಾನು ಬಂದ ಕಷ್ಟಂಗೊ ತನ್ನ ಮಗಳಿಂಗೂ ಬೇಡ - ಹೇಳಿ ಕಂಡತ್ತೋ ಏನೋ ಆ ಅತ್ತೆಗೆ (ಕೂಸಿನ ಅಮ್ಮಂಗೆ!). ಬಂದ ಮಾತುಕತೆಗಳಲ್ಲಿ ಕೂಸಿನ ಒರೆಂಗೆ ಹೆಚ್ಚಿಂದುದೇ ಬಯಿಂದೇ ಇಲ್ಲೆ. ಅಮ್ಮಂಗೆ ಹಿಡುಸದ್ರೆ ಅಲ್ಲಿಂದಲೇ ಒಪಾಸು!
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!

ಜಾತಕ ನೋಡಿ ಮದುವೆ ಅಪ್ಪದು ಹೇಳಿರೆ, ಬರೇ ಕೂಸಿಂಗೆ- ಮಾಣಿಗೆ ಮಾಂತ್ರ ಸಮಾದಾನ ಆದರೆ ಸಾಲ. ಹತ್ತರಾಣ ನೆಂಟ್ರುಗೊಕ್ಕೂ ಸಮಾದಾನ ಆಯೆಕ್ಕು. ಆ ಮಾಣಿಯ ನೆಂಟ್ರ ನೆಂಟ್ರ ನೆಂಟ್ರ ನೆಂಟ್ರಿಂಗೆ ಕುಡಿತ್ತ ಅಬ್ಯಾಸ ಇದ್ದೋ - ಹಾಂಗಾರೆ ಬೇಡ. ಆ ಕೂಸಿನ ಅಜ್ಜನ ಮನೆಯ ಅಜ್ಜನ ಮನೆಯ ಅಜ್ಜನ ಮನೆಯ ಹತ್ತರೆ ಒಂದು ಗಡಂಗು ಇದ್ದೋ? ಹಾಂಗಾರೆ ಬೇಡ!! ಹೀಂಗೆಲ್ಲ ಕೆಲವೆಲ್ಲ ಕೊಂಕುಗೊ ಇರ್ತು. ಅದೆಲ್ಲ ಇಲ್ಲಿಯುದೇ ಇದ್ದೇ ಇತ್ತು!

ಅಂತೂ ಅಕೇರಿಗೆ ಒಂದು ತಾಂಟಿತ್ತು - ಪಡ್ಳಾಗಿಯಾಣ ಮಾಣಿ - ಬೆಂಗ್ಳೂರಿಲಿ ಇಪ್ಪದಡ, ಒಬ್ಬನೇ ಮಗ, ಒಳ್ಳೆ ಸಂಬಳದ ಕೆಲಸ. ಒಳ್ಳೆ ಮನೆತನ. ಕೂಸಿನ ಅಮ್ಮಂಗೆ, ಕೂಸಿನ ಅಪ್ಪಂಗೆ, ಹತ್ತರಾಣ ನೆಂಟ್ರಿಂಗೆ - ಎಲ್ಲೊರಿಂಗೂ ಹಿತ ಅಪ್ಪ ಹಾಂಗಿಪ್ಪ ಒಂದು ಮನೆ.
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!
ಜಾತಕ ಅತ್ತಿತ್ತೆ ಆತು, ಬೈಲಕರೆ ಜೋಯಿಷಪ್ಪಚ್ಚಿ ಮೂಗಿನ ಕೊಡಿಲಿ ಕನ್ನಡ್ಕ ಮಡಗಿ "ಪಾಸ್" ಮಾಡಿದವು. ಅವಂಗೆ ಕೊಡುದು ಹೇಳಿ ನಿಘಂಟು ಆತು. ಆ ಮಾಣಿ ಹೇದರೆ ನಮ್ಮ ಬೇಂಕಿನ ಪ್ರಸಾದನ ಗುರ್ತದವ ಅಡ. ಹಾಂಗಾಗಿ ಮಾಣಿಕಡೆಂದಲೂ ರಜ ಶುದ್ದಿ ಗೊಂತಾತು.

ಮಾಣಿಗೆ ಗೌಜಿಯೇ ಗೌಜಿ. ಇಷ್ಟರ ಒರೆಂಗೆ ಒಂದು ಕೂಸು ಅವನ ಬಾಳಿನ ಒಳಂಗೆ ಬಯಿಂದಿಲ್ಲೆ, ಈಗ ಬತ್ತಾ ಇದ್ದು. ದಿನ ಹೋವುತ್ತೇ ಇಲ್ಲೆ. ಮದಲಿಂಗೆ ಅವಂಗೆ ತಿಂಗಳುಗೊ ಮಾಂತ್ರ ನೆಂಪಾಯ್ಕೊಂಡು ಇದ್ದದು - ಸಂಬಳ ಬಪ್ಪಲೆ ಬೇಕಾಗಿ. ಈಗ ದಿನ ದಿನವೂ ಅಲ್ಲದ್ದೆ ಕ್ಷಣ ಕ್ಷಣವೂ ಲೆಕ್ಕ ಮಾಡ್ಳೆ ಸುರು ಮಾಡಿದ. ಇಷ್ಟ್ರಒರೆಂಗೆ ಎಲ್ಲ ’ಒಬ್ಬೊಬ್ಬಂಗೆ’ ಯೋಚನೆ ಮಾಡುದರ ಇವ ಇಬ್ರಿಂಗೆ ಅಪ್ಪ ಹಾಂಗೆ ಯೋಚನೆ ಮಾಡ್ಳೆ ಸುರು ಮಾಡಿದ. ಬಾಳಿಲಿ ಮಳೆಗಾಲದ ಚಿಗುರು!

ಕೂಸು ನೋಡಿ ಬಪ್ಪ ಶಾಸ್ತ್ರ ಮಾಡಿ ಆತು, ಜಾಸ್ತಿ ಎಂತ ಮಾತಾಡಿದ್ದವಿಲ್ಲೆ ಇಬ್ರುದೇ. ಕೂಸಿಂಗೆ ಹೊಸತ್ತರಲ್ಲಿ ಹೆದರಿಕೆ ಇರ್ತಾಯಿಕ್ಕು ಹೇಳಿ ಗ್ರೇಶಿದ ಮಾಣಿ.
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!

ಬಪ್ಪ ವಾರ ಬದ್ದ!
ಹಾಂಗೆ ಬೆಂಗ್ಳೂರಿಂದ ಒಂದು ವಾರದ ಮದಲೇ ಊರಿಂಗೆ ಬಂದ.
ಊರಿಲಿ ಆದರೂ ದಿನ ಬೇಗ ಹೋವುತ್ತಾ ನೋಡ್ಳೆ! ಇನ್ನು ಬದ್ದ ಕಳುಶಿಕ್ಕಿ ಹೋಪದು ಹೇಳಿಗೊಂಡು. ಬಪ್ಪಗ ಕೂಸಿಂಗೆ ಕೊಡ್ಳೆ ಹೇಳಿಗೊಂಡು ಒಂದು ಮೋಬೈಲು ತೆಗದು ತಂದನಡ, ಸುಣ್ಣದಂಡೆಯ ಹಾಂಗೆ ಇರ್ತದು, ರಜ್ಜ ದೊಡ್ಡ ಇಕ್ಕೋ ಏನೊ! ಹೇಂಗೂ ಇವಂಗೇ ಬಪ್ಪದು ತಾನೇ, ಮದುವೆ ಆದ ಮತ್ತೆ - ಹಾಂಗೆ ಕುರೆ ಕಟ್ಟಿದ್ದಯಿಲ್ಲೆ - ಒಳ್ಳೆ ನಂಬ್ರದ್ದು, ಒಳ್ಳೆ ಕ್ರಯದ್ದು. ಈಗ ಆ ಕೂಸಿಂಗೆ ಪೋನು ಹೇಳಿ ಬೇರೆ ಇಲ್ಲೆ. ಆ ಮನೆಗೆ ಮಾಡೆಕ್ಕು. ಮಾವ ತೆಗವದು, ಅಲ್ಲದ್ರೆ ಅತ್ತೆ. ಅವರತ್ರೆ ಮಾತಾಡೆಕ್ಕು, ಮತ್ತೆ ಕೂಸಿಂಗೆ ಸಿಕ್ಕುತ್ತದು, ಮತ್ತುದೇ ಹಾಂಗೆ, ಕೂಸಿನತ್ರೆ ಮಾತಾಡುದು ಲೆಕ್ಕದ್ದೇ. ಅದಕ್ಕುದೇ ಹಾಂಗೆ ಆಯಿಕ್ಕು ಮಾತಾಡ್ಳೆಡಿಯದ್ದು ಹೇಳಿ ಗ್ರೇಶಿಗೊಂಡ. ಮೊಬೈಲು ಬಂದರೆ ಯೇವ ತೊಂದರೆಯೂ ಇಲ್ಲೆನ್ನೆ! ಬದ್ದದ್ದಿನ ಕೊಟ್ರಾತು, ಚೆಂದಲ್ಲಿ ತೆಕ್ಕೊಂಡೋಕು, ಪೈಸೆ ಬೆಂಗ್ಳೂರಿಂದ ಹಾಕುವೊ° ಹೇಳಿ ಯೋಚನೆ ಮಾಡಿಗೊಂಡು ಇತ್ತಿದ್ದ°. ಮೊಬೈಲು ತಂದ ಶುದ್ದಿ ಈಗಳೇ ಮನೆಲಿ ಹೇಳಿದ್ದ°ಯಿಲ್ಲೆ. ಮನೆಲಿ ನೆಗೆ ಮಾಡ್ಳೆ ಸುರು ಮಾಡುಗು ಹೇಳಿಗೊಂಡು. ಪಾಪ!
ಮನಸ್ಸು ಅಂತೂ ಹಿಡಿವೋರಿಲ್ಲದ್ದ ಕಂಬ್ಳದ ಗೋಣನ ಹಾಂಗೆ - ತಾರಾಮಾರಾ ಓಡುಲೆ ಸುರು ಆತು.
ಕೂಸು ಮಾಂತ್ರ ಯೇವ ವಿಷಯಲ್ಲಿದೇ ಇಲ್ಲೆ!!!

ಬದ್ದಕ್ಕೆ ಬರೇ ಆರು ದಿನ ಇಪ್ಪಗ, ಮಾಣಿಯ ಮನೆಗೆ ಪೋನು ಬಂತಡ.!
"... ಹೀಂಗೀಂಗೆ.." ಹೇಳಿ ವಿಷಯ ಹೇಳುಲೆ ಕೂಸಿನ ಸೋದರಮಾವ° ಮಾಡಿದ್ದು.
’ಮದಿಮ್ಮಾಳು ಕೂಸು ೨ ದಿನಂದ ಮನೆಲಿಲ್ಲೆ. ಎಲ್ಲಿ ಹೋಯಿದು ಗೊಂತಿಲ್ಲೆ, ನೆಂಟ್ರಮನೆಲಿ ಹುಡ್ಕಿದೆಯೊ, ಚೆಂಙಾಯಿಗಳತ್ರೆ ಕೇಳಿದೆಯೊ - ಎಂತು ಗುಣ ಆತಿಲ್ಲೆ. ಕಾಣೆ ಆಯಿದು ಹೇಳಿ ಪೋಲೀಸು ಕಂಪ್ಲೇಂಟು (ಕಾಣೆಅರ್ಜಿ) ಕೊಟ್ಟಿದೆಯೊ, ನಿಂಗೊಗೂ ವಿಷಯ ತಿಳಿಸಿಗೊಂಬ ಹೇಳಿ ಮಾಡಿದ್ದು, ಏನು ಗಡಿಬಿಡಿ ಇಲ್ಲೆ, ಎಲ್ಲ ಸರಿಅಕ್ಕು. ಏ?’ - ಹೇಳಿಗೊಂಡು!!!

ಕಂಬ್ಳದ ಗೋಣಂಗೆ ಮೂಗಿನ ಬಳ್ಳಿ ಹಿಡುದ ಹಾಂಗಾತು!!!
ಮಾಣಿಗೆ ಸುಮಾರು ಆಲೋಚನೆಗೊ ಹೊಕ್ಕು ಹೆರಟತ್ತು..
ಸಂಬಂದ ಇಷ್ಟ ಇತ್ತಿಲ್ಲೆಯೋ ಆ ಕೂಸಿಂಗೆ? ಚೆ, ಹೇಳುಲಾವುತಿತಲ್ದೋ? ಒತ್ತಾಯ ಎಂತದೂ ಮಾಡಿದ್ದಿಲ್ಲೆ.
ಮೊನ್ನೆ, ಕೂಸು ನೋಡ್ಳೆ ಹೋದ ದಿನವೇ ಹಾಂಗೆ, ಮೋರೆಲಿ ಉತ್ಸಾಹ ಇತ್ತಿಲ್ಲೆ, ಅದು ನಾಚಿಗೆಯೋ ಹೇಳಿ ಗ್ರೇಶಿದ, ಪಾಪ!
ಪೋನು ಮಾಡಿಪ್ಪಗಳೂ ಹಾಂಗೆ, ಆರೋ ಮೂರ್ನೇಯವರ ಹತ್ರೆ ಮಾತಾಡಿದ ಹಾಂಗೆ ಮಾಡಿಗೊಂಡಿತ್ತು, ಅದರಿಂದ ಜಾಸ್ತಿ ಅದರ ಅಪ್ಪಮ್ಮ ಕೊಂಗಾಟಲ್ಲಿ ಮಾತಾಡಿಗೊಂಡಿತ್ತಿದ್ದವು. ಅದೇ ಆಗಿ ಪೋನು ಮಾಡ್ಳೆ ಉತ್ಸಾಹವೇ ತೋರ್ಸಿಗೊಂಡಿತ್ತಿಲ್ಲೆ!!!
ಎಂತಾದಿಕ್ಕಪ್ಪಾ?!!
"ಹೊಲಿವಲೆ ಕೊಟ್ಟದರ ತತ್ತೆ ಅಮ್ಮಾ.." ಹೇಳಿಗೊಂಡು ಮನೆಂದ ಹೆರಟದಡ. ಮತ್ತೆ ಕಾಂಬಲೆ ಸಿಕ್ಕಿದ್ದಿಲ್ಲೆ ಅಡ. ಯೇವತ್ತೂ ಹೋವುತಲ್ದ, ಹಾಂಗೆ ಆರುದೇ ದೊಡ್ಡ ಗುಮನ ಮಾಡಿದ್ದಿಲ್ಲೆ.

ಮರದಿನವೇ ನಮ್ಮೋರ ಬಾಯಿಲಿ ಅದೊಂದು ದೊಡ್ಡ ಶುದ್ದಿ ಆಗಿ ಹರಡಿತ್ತು.

ನೆರೆಕರೆ ಜೆಂಬ್ರಲ್ಲಿ, ವಿಟ್ಳಪೇಟೆಲಿ, ಬದಿಯಡ್ಕಲ್ಲಿ, ಕೆಮ್ಕಲ್ಲಿ, ಬೇಂಕಿಲಿ, ಕೋಲೇಜಿಲಿ, ಶ್ಟೋರಿಲಿ, ಅಶ್ವತ್ತ ಕಟ್ಟೆಲಿ (ಲೋಕಾಭಿರಾಮ ಮಾತಾಡುವಗ) - ಎಲ್ಲ ದಿಕ್ಕುದೇ ಇದೇ ಶುದ್ದಿ. ಗರಿಗರಿ ರೆಕ್ಕೆಗೊ ಆ ಕತೆಗೆ.
ವಿಟ್ಳ ಕೋಲೇಜಿಂಗೆ ತಿರುಗುತ್ತ ಮಾರ್ಗ ಇದ್ದಲ್ದ, ಅಲ್ಲಿ ಒಂದು ಕಪ್ಪು ಬಣ್ಣದ ದೊಡ್ಡ ಕಾರು ನಿಂದುಗೊಂಡು ಇತ್ತಡ, ಒಳ ಮೂರು ಜೆನವುದೇ. ಕೇರಳದ ನಂಬ್ರ (KL) ಅಡ ಕಾರಿಂಗೆ. ಈ ಕೂಸಿಂಗೆ ಕಾದುಗೊಂಡು ಇದ್ದದಡ. ಇದು ಬಂದು ಹತ್ತಿದ ಕೂಡ್ಳೆ ಕಾರು ಹೆರಟತ್ತು, ಪಡ್ಳಾಗಿಯಂಗೆ. ಎಲ್ಲಿಗೋ?! ಉಮ್ಮಪ್ಪ!!!
ಕೆಲವು ಜೆನ ಕಾಸ್ರೋಡಿಂಗೆ ಹೇಳ್ತವು, ಕೆಲವು ಜೆನ ಕಾಂಞಂಗಾಡಿಂಗೆ ಹೇಳ್ತವು, ಕೆಲವು ಜೆನ ಮಲಪ್ಪುರಂಗೆ ಹೇಳ್ತವು, ಕೆಲವು ಜೆನ ದುಬಾಯಿಗೆ ಹೇಳ್ತವು. ಎಲ್ಲಿಗೆ ಹೇಳ್ತದು ಚಿದಂಬರ ರಹಸ್ಯ.

ನಿತ್ಯವೂ ಗೆಜ್ಜೆ ಹಾಕಿ ಗಲಗಲ ಮಾತಾಡಿಗೊಂಡು, ನಿತ್ಯ ಇರುಳುಹೊತ್ತು ಲಲಿತಾಸಹಸ್ರನಾಮವುದೇ, ಶಾಮಲದಂಡಕವುದೇ ಓದಿಗೊಂಡು, ಮಿಂದು ಶುಚಿಯಾಗಿ ಮೋರೆಗೆ ಚೆಂದದ ಬೊಟ್ಟು ಹಾಕಿಯೋಂಡು, ತಲಗೆ ಚೆಂದಚೆಂದದ ಹೂಗು ಸೂಡಿಗೊಂಡು ನೆಗೆನೆಗೆ ಮಾಡಿ ಮಾತಾಡಿಗೊಂಡು, ಪುರುಸೊತ್ತಪ್ಪಗ ಶಾಸ್ತ್ರೀಯ ಸಂಗೀತ ಹೇಳಿಗೊಂಡು, ಬರತನಾಟ್ಯವನ್ನುದೇ ಅಬ್ಯಾಸಮಾಡಿಗೊಂಡು, ಶಾಲೆಲಿದೇ ಒಳ್ಳೆ ಮಾರ್ಕು ತೆಕ್ಕೊಂಡು ಇದ್ದ ಆ ಕೂಸು... !!
ಕೆಲವು ಸಮಯಂದ ರಜ್ಜ ಮೌನಿ ಆಗಿದ್ದರೂ, ಮನೆಮಗಳಾಗಿ ಇತ್ತು.

ಆ ಕೂಸು ಮೊನ್ನೆಂದ ಇಲ್ಲೆ, ಕೂಸಿನ ಅಪ್ಪಮ್ಮಂಗೆ ಮಾತೇ ನಿಂದಿದು, ಮನೆ ಸಂಪೂರ್ಣ ನಿಃಶಬ್ದ!
ಒಂದು ಮಗಳು ಮಾಂತ್ರ ಇದಾ, ಹಾಂಗಾಗಿ ಹೆಚ್ಚು ಭಾವನೆಗೊ.
~~

ನಿಂಗಳ ಕ್ಲಾಸಿಲಿ ಹಿಂದಾಣ ಬೆಂಚಿಲಿ ಚೆಕ್ಕಂಗೊ ಧಾರಾಳ ಇದ್ದಿಕ್ಕು / ಇಕ್ಕು.
ಕಲಿವಲೆ ನಿಂಗಳಷ್ಟೆಲ್ಲ ಉಶಾರಿ ಎಂತ ಆಗಿರ.
ಶಾಲೆ ಬಿಟ್ಟ ಕೂಡ್ಳೆ ಓ ಅಲ್ಲಿ ಮಾರ್ಗದ ಕರೆಲಿಪ್ಪ ಒಂದು ಅಂಗುಡಿಲಿ ಮೀನು ಕಟ್ಟಿಕೊಡ್ಳೆ ಸೇರಿಗೊಂಗು. ಅದರ ಮನೆಲಿ ಕನಿಷ್ಟ ೧೪ ಮಕ್ಕೊ. ಅಪ್ಪಮ್ಮಂಗೆ ಈ ಕುಟ್ಟ ಮನೆಗೆ ಬಂದರೂ ಗೊಂತಾಗ, ಬಾರದ್ರೂ ಗೊಂತಾಗ. ಮನೆಲೇ ಗೊಂತಾಗ ಹೇಳಿರೆ ಮತ್ತೆ ಇನ್ನು ಶಾಲಗೆ ಹೋಗದ್ರೆ ಗೊಂತಕ್ಕೋ?

ಹತ್ತುನೇ ಕ್ಲಾಸಿನ ಒರೆಂಗೆ ಬಕ್ಕು, ಮಾಷ್ಟ್ರನ ಒತ್ತಾಯಕ್ಕೆ. ಮತ್ತೆ ಅದರ ಊರಿಲೇ ಕಾಂಬಲೆ ಸಿಕ್ಕ.
ಕಾಸ್ರೋಡಿಲಿಯೋ, ಕೊಡೆಯಾಲಲ್ಲಿಯೋ, ಪುತ್ತೂರಿಲಿಯೋ ಎಂತಾರು ಕಚ್ಚೋಡಕ್ಕೆ ಸೇರಿಗೊಂಗು.
ಅವರ ಕಾಕ° ಯೇವದಾರು ಇರ್ತು ಇದಾ, ದೊಡ್ಡ ಒಯಿವಾಟು ಮಾಡಿಗೊಂಡು. ಅದರ್ಲಿ ತಿಂಗಳಿಂಗೆ ಇಂತಿಷ್ಟು ಹೇಳ್ತ ಕೆಲಸಕ್ಕೆ ಸೇರಿಗೊಂಗು. ಕೈಲಿ ರಜಾ ಪೈಸೆ ಮಾಡುಗು.

ಅಷ್ಟಪ್ಪಗ ಒಂದು ಬೈಕ್ಕು ಬತ್ತು - ಮಾಡಿದ ಪೈಸೆ ಪೂರ ಕಳವಲೆ.
ಎಲ್ಲ ಕಳದಾದ ಮತ್ತೆ ಸಾಲಗೀಲ ಮಾಡಿ ಸ್ವಂತದ ಒಂದು ಕಚ್ಚೋಡ ಹಾಕುಗು. ಮೈ ಮುರಿಯದ್ದ ಹಾಂಗಿರ್ತ ಕೆಲಸ ಇಪ್ಪದು.
ಬಳೆ ಅಂಗುಡಿಯೋ, ಒಸ್ತ್ರದ ಅಂಗುಡಿಯೋ, ಚೆರ್ಪಿನ (Footwear) ಅಂಗುಡಿಯೋ - ಹೀಂಗೆಂತಾರು.
ನಮ್ಮೋರ ಕೂಸುಗೊಕ್ಕೆ ಅತೀ ಅಗತ್ಯದ ಸಾಮಾನುಗೊ.
ಅಂಗುಡಿಲಿ ಮೂರು ಹೊಡೆಯುದೇ ಕನ್ನಾಟಿ. ಮೂರು ಹೊತ್ತುದೇ ಚೆಂದ ನೋಡುದು, ತಲೆ ಬಾಚುದು. ಒಂದು ಪೇನು ತಿರುಗಿಸಿಗೊಂಡು ಕೂಬದು. ಹಾಂಗಾಗಿ ಒಳ್ಳೆ ಚೆಂದ ಇರ್ತವುದೇ.
ಒಂದು ಪೇಂಟಂಗಿಯ ಇಪ್ಪತ್ತೈದು ದಿನ ಹಾಕುದು, ಇಪ್ಪತ್ತಾರ್ನೇ ದಿನ ತೊಳವದು. ( ಆ ದಿನ ಮುಂಡು ಸುತ್ತುಗು ).
ಉಂಬಲೆ ದಕ್ಕಿತ ಪೈಸೆ ಆವುತ್ತು. ಹಾಂಗೆ ಬೇಕಾರೆ ದುಬಾಯಿಗೆ ಹೋದ ಅದರ ದೊಡ್ಡಣ್ಣ (ಅದರ ಅಪ್ಪನ ಸುರೂವಾಣ ಹೆಂಡತ್ತಿಯ ದೊಡ್ಡಮಗ ಇತ್ಯಾದಿ...) ಇದ್ದಲ್ದ, ಅದರತ್ರೆ ಪೈಸೆ ಕೇಳುದು.
ಅಂತೂ, ಕಷ್ಟ- ತಲೆಬೇನೆ ಇಲ್ಲದ್ದ ಆರಾಮ ಜೀವನ!

ನಮ್ಮೋರ ಕೂಸುಗೊ ಇದೇ ಅಂಗುಡಿಗೆ ಹೋಪದು.
ಒಳ್ಳೆ ಮಾಲುಗೊ, ಒಳ್ಳೆ ಸಂಗ್ರಹಂಗೊ ಇರ್ತು, ಚೆಂದ ಮಾಡಿಗೊಂಬಲೆ ಬೇಕಾದ್ದೆಲ್ಲ ಅಲ್ಲಿ ಸಿಕ್ಕುತ್ತು ಹೇಳಿಗೊಂಡು.
ಇವಕ್ಕೆ ವಸ್ತುಗೊ ಸಿಕ್ಕಿದ ಕುಶಿ, ಅವಕ್ಕೆ ಗಿರಾಕಿ ಸಿಕ್ಕಿದ ಕುಶಿ.
~~

ಅಂತೂ ಈ ಕೂಸು ಕಾಣೆ ಆದ ವಿಶಯ ಜೋರಾದಷ್ಟು, ಹೊಸ ಹೊಸ ಶುದ್ದಿಗೊ ಗೊಂತಾತಡ, ಅದರ ಕ್ಲಾಸಿನವರ ಬಾಯಿಂದಲೋ, ನೆರೆಕರೆಯವರ ಬಾಯಿಂದಲೋ, ಕಂಡವರ ಬಾಯಿಂದಲೋ ಎಲ್ಲ:

ನಮ್ಮ ಆ ಕೂಸುದೇ ಕೋಲೇಜಿಂಗೆ ಹೋಪಗ ಇದೇ ನಮುನೆ ಒಂದು ಅಂಗುಡಿಗೆ ಹೋಗಿತ್ತಡ, ಬಳೆಯೋ, ಕೆಮಿಗೆ - ನೇಲ್ತದೋ ಎಲ್ಲ ಸಿಕ್ಕುವ ಅಂಗುಡಿ. ಅಲ್ಯಾಣ ಚೆಕ್ಕ° ಚೆಂದಲ್ಲಿ ಮಾತಾಡಿ ಮಾತಾಡಿ, ತುಂಬ ಆತ್ಮೀಯ ಆತಡ. ಪಾಪ, ಅದರ ನಂಬಿತ್ತು ಈ ಕೂಸು. ನಮ್ಮೋರು ನಂಬುದು ಬೇಗ ಇದಾ. ಯೇವತ್ತೂ ಕೋಲೇಜು ಮುಗುಶಿ ಅದರ ಅಂಗುಡಿಗೆ ಹೋಪಲೆ ಸುರು ಮಾಡಿತ್ತಡ. ಅಲ್ಲಿ ಅದರತ್ರೆ ಹತ್ತು ನಿಮಿಶ ಮಾತಾಡಿ ಮನೆಗೆ ಹೆರಡುದು ಕ್ರಮ ಆತು ಆ ಕೂಸಿಂದು.
ಒಂದು ದಿನ ಅಂತೂ ’ಅಮ್ಮ, ಎನ್ನ ಕ್ಲಾಸು(ಮೇಟು)ಗಳ ಒಟ್ಟಿಂಗೆ ಮಂಗ್ಳೂರಿಂಗೆ ಹೋವುತ್ತೆ’ ಹೇಳಿ ಮನೆಂದ ಹೋಯಿದಡ. ಆ ದಿನ ಆ ಚೆಕ್ಕನ ಅಂಗುಡಿಗೆ ರಜೆ ಅಡ!

ಕೊಡೆಯಾಲಲ್ಲಿ ಎಲ್ಲಿಗೆ ಹೋಯಿದವೋ, ಆ ಮರುಳ ಇದರ ಯೇವ ರೀತಿಲಿ ನೋಡಿಗೊಂಡಿದೋ, ಎಂತ ಉಪದ್ರ ಕೊಟ್ಟಿದೋ - ಒಂದೂ ಅರಡಿಯ- ಆರಿಂಗುದೇ! ಇದರ ಕೆಲವು ಪಟವುದೇ ತೆಗದು ಅದು ಮಡಿಕ್ಕೊಂಡಿದು ಹೇಳಿ ಒಂದು ಶುದ್ದಿ. ಕೂಸಿನ ಹೆಗಲಿಂಗೆ ಆ ಕುಟ್ಟ ಕೈ ಹಾಕಿ ನಿಂದಿಪ್ಪಗ ತೆಗದ ಪಟ ಅಡ. ಕೊಡೆಯಾಲಲ್ಲಿ ದೊಡ್ಡ ಅಂಗುಡಿ ಇದ್ದಲ್ದ, ಅದರ ಎದುರು ತೆಗದ್ದಡ. ತೆಗವಗ ಪ್ರೀತಿ ಇತ್ತೋ ಗೊಂತಿಲ್ಲೆ, ಮತ್ತೆ ಅಂತೂ ಅದರ ಉಪಯೋಗವೇ ಬೇರೆ ಆತು.
ನಿತ್ಯವೂ ’ಮನೆಂದ ಪೈಸೆ ತಾ, ಇಲ್ಲದ್ರೆ ಈ ಪಟ ಅಪ್ಪಂಗೆ ತೋರುಸುತ್ತೆ’ ಹೇಳಿ ಹೆದರುಸಿಗೊಂಡು ಇತ್ತಡ. ಮಾನಕ್ಕೆ ಹೆದರಿ ಅಪ್ಪನತ್ರೆ ’ಪೀಸಿಂಗೆ’, ಪುಸ್ತಕಕ್ಕೆ, ಬೇಗಿಂಗೆ(Bag),ಕಾಜಿ(ಬಳೆ)ಗೆ ಅದಕ್ಕೆ-ಇದಕ್ಕೆ ಹೇಳಿ ಪೈಸೆ ಕೇಳಿ ತಂದುಕೊಟ್ಟೋಂಡಿತ್ತಡ ಪಾಪ.! (’ಬ್ಲೇಕುಮೇಲು’ ಹೇಳುದಡ ಅದರ)!
ನಮ್ಮೋರಿಂಗೆ ಹೆಚ್ಚಿನವಕ್ಕುದೇ ಪೈಸೆಂದ ಮಾನ ದೊಡ್ಡದಲ್ದಾ? ಹಾಂಗೆ.!

ಎಲ್ಲದಕ್ಕುದೇ ಕಾರಣ ಆ ಒಂದು ’ಪಟ’. ಅದರ ಮಡಿಕ್ಕೊಂಡು ಎಂತ ಬೇಕಾರು ತರುಸಿಗೊಳ್ತು, ಎಂತ ಬೇಕಾರು ಮಾಡುಸಿಗೊಳ್ತು. ಅಂದು ಒಂದು ದಿನ ಮನೆಲಿ ಹೇಳದ್ದೆ ಅದರೊಟ್ಟಿಂಗೆ ಕೊಡೆಯಾಲಕ್ಕೆ ಹೋದ್ದಕ್ಕೆ ಜೀವನ ಪೂರ್ತಿ ಅನುಬವಿಸುವ ಹಾಂಗಾತು.
~~

ತೀರಾ ಇತ್ತೀಚೆಗೆ, ಆ ಕೂಸಿನ ಮದುವೆ ನಿಗಂಟಪ್ಪಗ ಅದರ ಉಪದ್ರ ಇನ್ನೂ ಜೋರಾತಡ.
’ನೀನು ಅಲ್ಲಿ ಮದುವೆ ಅಪ್ಪಲಾಗ, ಎನ್ನ ಆಯೆಕ್ಕು’ ಹೇಳಿತ್ತಡ ಆ ಮಂಗ.

ಕೂಸು ತುಂಬ ಚೆಂದ ಇತ್ತು, ಚುರುಕ್ಕುದೇ ಇತ್ತು. ಮಂಗನ ಕೈಲಿ ಮಾಣಿಕ್ಯ ಹೇಳಿದ ಹಾಂಗೆ ಆ ಜನ ಇದರ ಆಟ ಆಡುಸುಲೆ ಸುರು ಮಾಡಿತ್ತು. ಒಳ್ಳೆ ಮಾಣಿ ಬಂದು ಎನ್ನ ದೂರಕ್ಕೆ ಕರಕ್ಕೊಂಡು ಹೋಕು ಹೇಳಿ ನಿತ್ಯವೂ ಆ ಕೂಸು ಯೋಚನೆ ಮಾಡಿಗೊಂಡಿತ್ತೋ ಏನೋ, ಇದು ಬಿಡೆಕ್ಕೇ. ಗೌಜಿಲಿ ಮನೆಪೂರ ಓಡಾಡಿಗೊಂಡು ಇದ್ದ ಆ ಕೂಸು ಕ್ರಮೇಣ ಜೀವನಲ್ಲಿ ಉತ್ಸಾಹವನ್ನೇ ಕಳಕ್ಕೊಂಡತ್ತು.


ಕೆರಗೆ ಇಳಿವನ್ನಾರ ಛಳಿ. ಇಳುದ ಮತ್ತೆ ಅದೇ ಒಂದು ಹಿತ ಆವುತ್ತಡ, ಹಾಂಗೆ ಆತು ಈ ಕೂಸಿನ ಒಯಿವಾಟುದೇ.

ಹೇಂಗೂ ಈ ಕುಟ್ಟ° ಇಂದಿನ ಒರೆಂಗೆ ಚೆಂದಕೆ ನೋಡಿಗೊಂಡಿದು. ಇನ್ನು ಬೇರೆ ಒಬ್ಬನ ಮದುವೆ ಆದರೂ ಮತ್ತೆ ಅಪನಂಬಿಕೆ, ಅಪವಾದ ಏನಾರು ಬಂದರೆ ಜೀವನಲ್ಲಿ ಕಷ್ಟ. ಬಿಟ್ಟಿಕ್ಕಿ ಹೋಪಲೂ ಸಾಕು. ಮತ್ತೆ ಒಬ್ಬಂಟಿಯಾಗಿ ಜೀವಮಾನ ಇಡೀ ಬದುಕ್ಕುದು ಸುಲಬ ಏನೂ ಅಲ್ಲ. ’ಎಂತದೋ ಒಂದು, ಹೇಂಗಾದರೆ ಹಾಂಗೆ’ ಹೇಳಿ ನಿರ್ದಾರ ಮಾಡಿತ್ತೋ ಏನೋ! ಛೆ!

ಕೆಲವು ಸಂದಾನಂಗೊ ಬಪ್ಪಲೆ ಸುರು ಆತು. ಒಂದೊಂದು ಸಂದಾನಕ್ಕೂ ಮನೆಲಿ ಅದರ ಅಮ್ಮಂದು ಕೊರತ್ತೆಗೊ. ಅದು ಇಲ್ಲೆ, ಇದು ಇಲ್ಲೆ ಹೇಳಿ. ಕೂಸಿಂಗೆ ಮೊದಲೇ ಆಸಕ್ತಿ ಇತ್ತಿಲ್ಲೆ! ಪ್ರತಿಯೊಂದು ಸಂದಾನ ಮುರುದಪ್ಪಗಳೂ ’ಅಬ್ಬ, ಸದ್ಯಕ್ಕೆ ಬದುಕ್ಕಿದೆ’ ಹೇಳಿ ಗ್ರೇಶಿಗೊಂಡಿತ್ತೋ ಏನೋ.
ಈ ಒಂದು ಸಂಬಂದ ಕೂಡಿ ಬಂತು. ಎಲ್ಲೊರುದೇ ಕುಶೀಲಿ ಇತ್ತಿದ್ದವು. ಅಪ್ಪ, ಅಮ್ಮ, ನೆಂಟ್ರು - ಆಪ್ತೇಷ್ಟರು.
ಕೂಸುದೇ, ಅದರ ಆ ಪ್ರೆಂಡುದೇ ಬಿಟ್ಟು.
ಯಬಾ, ಅದರ ಮನಸ್ಸಿಲಿ ಎಂತಾ ಜ್ವಾಲಾಮುಖಿ ಇದ್ದಿಕ್ಕು? ಯೋಚನೆ ಮಾಡಿ- ಹೇಳಿದ° ಆಚಕರೆ ಮಾಣಿ!
~~

ಒಯಿವಾಟಿಲಿ ಎಲ್ಲ ಸೋತ ಕುಟ್ಟಂಗೊಕ್ಕೆ ಹೇಳಿಯೇ ಒಂದು ಸ್ಕೀಮು ಬಯಿಂದಡ ಅವರದ್ದರ್ಲಿ, ಕನಿಷ್ಟ ಒಂದು ಕೂಸಿನ ಬ್ಯಾರ್ತಿ ಮಾಡೆಕ್ಕು - ಹೇಳಿ.
ಮದುವೆ ಆಯೆಕ್ಕು ಹೇಳಿ ಏನಿಲ್ಲೆ, ಸಂಸಾರ ಮಾಡೆಕ್ಕು ಹೇಳಿ ಏನು ಇಲ್ಲೆ, ಪ್ರೀತಿ ಕೊಡೆಕ್ಕು ಹೇಳಿ ಏನಿಲ್ಲೆ, ಬ್ಯಾರ್ತಿ ಮಾಡೆಕ್ಕು. ಮಕ್ಕೊ ಹುಟ್ಟುಸೆಕ್ಕು - ಅಷ್ಟೆ. ಆ ಸ್ಕೀಮಿಂಗೆ ಒಪ್ಪಿರೆ ಕೇಳಿದಾಂಗೆ ಪೈಸೆ ಕೊಡ್ತವಡ. ದುಬಾಯಿಂದ ಪೈಸೆ ಬತ್ತಡ ಅದಕ್ಕೆಲ್ಲ. ಸ್ಕೀಮಿನ ಎಲ್ಲಿ ಬೇಕಾರುದೇ ಮಾಡ್ಲಕ್ಕಡ. ಊರಿಲಿಯೋ, ಕೊಡೆಯಾಲಲ್ಲಿಯೋ, ಬೆಂಗುಳೂರಿಲಿಯೋ - ಎಲ್ಲಿ ಬೇಕೋ ಅಲ್ಲಿ. ಬೆಂಗುಳೂರಿಲಿಯೋ ಮತ್ತೊ ಒಪ್ಪಿಯೊಂಡ್ರೆ ಸುರುವಿಂಗೇ ಇಂತಿಷ್ಟು ಹೇಳಿ ಕೊಡ್ತವಡ. ಉಳ್ಕೊಂಬಲೆ ಅಲ್ಲೇ ಪಳ್ಳಿಗಳಲ್ಲಿ ವಸತಿ ವೆವಸ್ತೆ ಮಾಡ್ತವಡ. ತಿರುಗುಲೆ ಬೈಕ್ಕು ಕೊಡ್ತವಡ, ಮಾತಾಡ್ಳೆ ಮೊಬೈಲು ಕೊಡ್ತವಡ. ಹಾಕುಲೆ ಚೆಂದ ಚೆಂದದ ಅಂಗಿ ಪೇಂಟು ಕೊಡ್ತವಡ. ತಿಂಗಳುಗಟ್ಳೆ ದರ್ಮಕ್ಕೇ ಸಾಂಕುತ್ತವಡ. ಅವರ ಕೆಲಸ ತುಂಬ ಸರಳ, ಆರಾರು ಸಿಕ್ಕಿರೆ ಪ್ರೀತಿಯ ನಾಟಕ ಮಾಡಿ ಮರುಳು ಮಾಡಿ ಮದುವೆಗೆ ಒಪ್ಪುಸುದು. ಅಷ್ಟೆ.

ಆ ಪೇನ್ಸಿ ಮಡಿಕ್ಕೊಂಡಿದ್ದ ಕುಟ್ಟಂಗುದೇ ಈ ಸ್ಕೀಮು ತುಂಬ ಇಷ್ಟ ಆತು.
ಈ ಕೂಸಿನ ಮದುವೆ ಆದರೆ ಒಂದರಿಂಗೇ ಗೆಂಟು ಸಿಕ್ಕುತ್ತನ್ನೇ ಹೇಳಿ ಗ್ರೇಶಿತ್ತು. ಕೂಸು ಇದರೊಟ್ಟಿಂಗೆ ಇರ್ತ ಪಟವ ಹಿಡುದು ಆಡುಸಿತ್ತಡ. ಸುರುಸುರುವಿಂಗೆ ಕೂಸು ಹೆದರಿರೂ, ಆ ಕುಟ್ಟ ಧೈರ್ಯ ತುಂಬಿದ ಮತ್ತೆ ’ಸರಿ ಅಂಬಗ’ ಹೇಳಿ ಒಪ್ಪಿತ್ತಡ. ’ಎನ್ನ ಬೇಟೆ ಬಲಗೆ ಬಿದ್ದತ್ತು’ ಹೇಳಿ ಒಂದು ಸೂಚನೆಯ ಈ ಕುಟ್ಟ ಮೇಗಂಗೆ ಕೊಟ್ರೆ ಆತಡ. ಮತ್ತೆ ವೆವಸ್ತೆ ಅವ್ವೇ ಮಾಡ್ತವಡ, ಬಂದು.

ಮಲಪ್ಪುರಂ ನ ಹತ್ತರೆ ಒಂದು ಪಳ್ಳಿ ಇದ್ದಡ. ಅಲ್ಲಿ ’ಯುವ ಜೋಡಿ’ಗೊಕ್ಕೆ ಮದುವೆ ಮಾಡುಸಿ, ಕುರಾನಿನ ಧರ್ಮದೀಕ್ಷೆ ಕೊಟ್ಟು, ಬೆಲಿಯ ಕಿತಾಬಿನ ಬಾಯಿಪಾಟ ಮಾಡುಸಿ, ಮಂಡೆ ತಿರುಗುಸಿ ಕಳುಸುತ್ತವಡ. ಉಂಬಲೆ ತಿಂಬಲೆ ಎಲ್ಲ ಏನು ತೊಂದರೆ ಇಲ್ಲೆ. ದುಬಾಯಿ ಪೈಸೆ, ದರ್ಮದ್ದು. ಈ ಕೂಸುಗೊ ಕುರಾನು ಓದೆಕ್ಕು, ಕಲಿಯೆಕ್ಕು, ಜಾಸ್ತಿ ಏನಲ್ಲ - ಮಕ್ಕೊಗೆ ಕಲಿಶುವಷ್ಟಾದರೂ!
ಎರಡು ಒರಿಷ ಸಾಂಕುತ್ತವು, ಕುಟ್ಟ 2 ಮಕ್ಕಳ ಕೊಡೆಕ್ಕು. ಅಲ್ಲಿಗೆ ಆ ಸ್ಕೀಮು ಮುಗಾತು.

ಬೇರೆ ಕರ್ಚಿಂಗೆ ಪೈಸೆ ಇಲ್ಲದ್ರೆ ಎಂತರ ಮಾಡುದು? ಕೂಸಿನ ಅಪ್ಪಮ್ಮ ಪ್ರೀತಿಲಿ ಮಾಡುಸಿ ಹಾಕಿದ ಬಳೆ, ಗೆಜ್ಜೆ, ನೇವಳ, ಚೈನು - ಎಲ್ಲ ಒಂದೊಂದನ್ನೇ ಮಾರಿತ್ತು. ಇನ್ನೆಂತಕೆ ಬೇಕೇ ಅದು? ಮೋರೆಲಿ ಒಂದು ಬೊಟ್ಟುದೇ ಇಪ್ಪಲಾಗ ಹೇಳಿದ ಮತ್ತೆ ಇದೆಲ್ಲ ಆಭರಣಂಗೊ ಎಂತಕೆ!
ಮತ್ತೆ ಪುನಾ ಕುಟ್ಟನ ಕೈ ಕಾಲಿ ಆದರೆ?
ಇನ್ನೊಂದು ಸ್ಕೀಮು ಸುರು ಮಾಡೆಕ್ಕು. ಹೇಂಗೂ ಒಂದೇ ಹೆಂಡತ್ತಿ ಹೇಳ್ತ ಕಟ್ಟುಪಾಡು ಇಲ್ಲೆ, ದಾಂಪತ್ಯದ ಪ್ರೀತಿಯ ಬಂಧ ಮೊದಲೇ ಇಲ್ಲೆ.
ಎಡಿಗಾದಷ್ಟು ಸ್ಕೀಮು ಮಾಡಿ ಮಾಡಿ ಅಕೆರಿಗೆ ಒಂದು ವರ್ಜಿನಲ್ಲು ಬ್ಯಾರ್ತಿಯ ಮದುವೆ ಆಗಿ ಆರಾಮಲ್ಲಿ ಇರ್ತು ಆ ಜೆನ.
~~

ಬದ್ದ ಮುರುತ್ತು. ಮೊಬೈಲು ಮಾಣಿಯ ಕೈಲೇ ಒಳುತ್ತು. ಪಾಪ!
ಕೂಸು ಕಾಣೆ ಆಗಿ ಒಂದು ವಾರ ಆತು. ಚೆ! ಈಗ ಎಲ್ಲಿಕ್ಕೋ? ಎಂತ ಮಾಡ್ತಾ ಇಕ್ಕೋ? ಅದರ ಅಪ್ಪಮ್ಮಂಗೆ ಬಪ್ಪ ಯೋಚನೆ ಒಪ್ಪಣ್ಣಂಗೆ ಬತ್ತಾ ಇದ್ದು.
ಕರಕ್ಕೊಂಡು ಹೋಗಿ ಒಂದು ವಾರಲ್ಲಿ ದನದ ಮಾಂಸ ತಿನುಸುತ್ತವಡ. ಹುಳಿಮಜ್ಜಿಗೆಯೇ ರಜ ಮೂರಿಬಂದರೆ ಆಗಡ ಈ ಕೂಸಿಂಗೆ, ಇನ್ನು ಅದೆಲ್ಲ ಹೇಂಗೆ ತಿಂತೋ- ಅಮ್ಮಂಗೆ ಗ್ರೇಶಿರೇ ಬೇಜಾರಾವುತ್ತು!
ಏನೋ ಒಂದು ತೆವಲಿಲಿ ಹೋದರೂ, ಇತ್ಲಾಗಿ ಬತ್ತೆ ಹೇಳಿ ಗ್ರೇಶಿರೆ ಸುಮಾರು ಕಷ್ಟಂಗೊ ಆ ಕೂಸಿಂಗೆ:

  • ತಾನು ಎಲ್ಲಿ ಇದ್ದೆ ಹೇಳಿ ಗೊಂತಿಲ್ಲೆ, ಬಪ್ಪಲೆ ಪೈಶೆ ಇಲ್ಲೆ.
  • ಸುತ್ತುದೇ ಅವರ ಸರ್ಪಗಾವಲು
  • ಬಂದರೆ ಮನೆಯ ಹೆದರಿಕೆ - ಅಪ್ಪಮ್ಮ ಎಂತ ಮಾಡುಗೋ ಹೇಳಿ.
  • ಸಮಾಜದ ಹೆದರಿಕೆ, ನಿತ್ಯವೂ ನೋಡಿ ನೆಗೆಮಾಡಿ ಮರಿಯಾದಿ ತೆಗಗೋ ಹೇಳಿ.
  • ಭವಿಷ್ಯ? ಇನ್ನಾರು ಮದುವೆ ಆವುತ್ತ°? ಹೇಳ್ತ ಯೋಚನೆ.

ಇದಕ್ಕೆಲ್ಲ ಹೆದರಿ ಅದೇ ಅಕ್ಕು ಹೇಳಿ ಕರಿಒಸ್ತ್ರದ ಹಿಂದೆ ಇದ್ದುಗೊಳ್ತವು, ಜೀವಮಾನ ಪೂರ್ತಿ!!! ಚೆ!

ಸಣ್ಣ ಇಪ್ಪಗ ಅಮ್ಮನ ಕೈಲಿ ಬೈಗಳು ತಿಂದೋಂಡು ಕಲ್ತ ಎಷ್ಟೋ ಶ್ಳೋಕಂಗೊ, ದೇವರ ಪದ್ಯಂಗೊ, ಅದರಿಂದ ಮತ್ತೆ ಕಲ್ತ ಸಂಗೀತ, ಅದರಿಂದ ಮತ್ತೆ ಕಲ್ತ ಭರತನಾಟ್ಯ -  ಯೇವದುದೇ ಜೀವಮಾನ ಪೂರ್ತಿ ಉಪಯೋಗಕ್ಕೆ ಬತ್ತಿಲ್ಲೆ. ಶಾಮಲದಂಡಕದ ಲಯಕ್ಕೆ ತಲೆತೂಗುವ ಅವಕಾಶವೇ ಇಲ್ಲೆ. ಇನ್ನು ಎಂತ ಇದ್ದರೂ ಯೇವದೋ ಜೀವನ ಪದ್ದತಿಗೆ  ಸೇರಿದ ಕೆಲವು ಕಟ್ಟುಪಾಡುಗೊ - ನಮ್ಮ ಊರಿಂಗೆ ಹಿಡುಸದ್ದು.
~~

ಇಷ್ಟರ ಹೇಳಿ ಆಚಕರೆ ಮಾಣಿ ಒಂದರಿ ಉದ್ದ ಉಸುಲು ತೆಕ್ಕೊಂಡ. ಇದರ ಕೇಳಿಗೊಂಡಿದ್ದ ಗುಣಾಜೆಮಾಣಿ ಪಿಸುರಿಲಿ ಅವನ ಕೋಲರಿನ ಕಚ್ಚಿ - ಅವ ಪಿಸುರು ಬಂದರೆ ಹಾಂಗೇಡ! ’ಎಂತಾರು ಮಾಡೆಕ್ಕು ನಾವು’ ಹೇಳಿಕ್ಕಿ ಬರಬರನೆ ಹೆರಟಿಕ್ಕಿ ಹೋದ°. ಮನೆಗೆ ಹೋಗಿ ಅವನ ಓರುಕುಟ್ಟಿಲಿ ಈ ಶುದ್ದಿಯ ಪಟ ನಾಕು ಹಾಕಿದನಡ - ಅದರ ನೋಡಿದ ಪೆರ್ಲದಣ್ಣ ಬೆಂಗ್ಳೂರಿಂದ ಇರುಳು ಪೋನುಮಾಡಿಪ್ಪಗ ಹೇಳಿದ°. "ಕುಂಞಿ ಅಪುರೂಪಲ್ಲಿ ಒಳ್ಳೆಕೆಲಸ ಮಾಡಿದ°" - ಹೇಳಿ ಅಜ್ಜಕಾನ ಬಾವಂದು ನೆಗೆ.

ನಿಂಗೊ ಮದುವೆ ಪ್ರಾಯಕ್ಕೆ ಬಂದ ಒಪ್ಪಣ್ಣ / ಒಪ್ಪಕ್ಕ ಆಗಿದ್ದರೆ ಖಂಡಿತಾ ಈ ಶುದ್ದಿ ಗೊಂತಿರೆಕು.
ಹಾಂಗೇ, ಆತ್ಮೀಯ ನೆಂಟ್ರುಗಳ ಪೈಕಿ ಮದುವೆ ಹತ್ತರೆ ಆದ ಕೂಸುಗೊ / ಮಾಣಿಯಂಗೊ ಇಪ್ಪವು, ಮನೆಲಿ ಅಕ್ಕ ತಂಗೆ ಇಪ್ಪವು - ಎಲ್ಲರಿಂಗೂ ಇದು ಖಂಡಿತವಾಗಿಯೂ ಗೊಂತಿಪ್ಪಲೇ ಬೇಕು.
ಒಟ್ಟಿಲಿ ನಮ್ಮ ಸಮಾಜಲ್ಲಿ ಎಲ್ಲೊರುದೇ ಈ ಶುದ್ದಿ ಗೊಂತಿಪ್ಪೋರೇ ಆಯೆಕ್ಕು. ಗೊಂತಿಪ್ಪೋರು ಗೊಂತಾಗದ್ದವಕ್ಕೆ ಪಸರುಸಲೇ ಬೇಕು ಹೇಳಿ ಒಪ್ಪಣ್ಣನ ಆಶಯ.
~~

ಅಜ್ಜಂದ್ರ ಕಾಲಲ್ಲಿ ಬಾಲ್ಯ ವಿವಾಹ ಹೇಳಿ ಇತ್ತು. ಮನೆಲಿ ಅಜ್ಜಿ ಇದ್ದರೆ ಕೇಳಿ, ’ಎಷ್ಟೊರಿಷಲ್ಲಿ ಮದುವೆ ಆಯಿದಜ್ಜೀ ನಿಂಗೊಗೇ?’ ಹೇಳಿ. ಒಂಬತ್ತು - ಹೇಳುಗು, ಅದೇ ಕಾಲದ ನಾಚಿಗೆ ಮಾಡಿಗೊಂಡು. :-) ಸಣ್ಣ ಇಪ್ಪಗಳೇ ಮದುವೆ ಮಾಡಿಬಿಡುದು. ಅಣ್ಣ-ತಮ್ಮ-ತಂಗೆ-ಅಪ್ಪ-ಅಮ್ಮ- ಹೇಳಿದ ಹಾಂಗೆ ಗೆಂಡ-ಹೆಂಡತ್ತಿ ಹೇಳ್ತ ಸಂಬಂಧವೂ ಬೆಳದಿರ್ತು. ಒಂದು ಕೂಸಿನ ರಕ್ಷಣೆಯ ಜವಾಬ್ದಾರಿ ಒಬ್ಬ ಮಾಣಿಗೆ ಸಿಕ್ಕಿರ್ತು - ಯೇವದೇ ಅಗತ್ಯತೆ ಬಂದರೂ ಅವನೇ ನೀಗುಸಿ ಬಿಡೆಕ್ಕು. ಕೂಸಿಂಗೆ ಎಂತ ಆದರೂ ಆ ಮಾಣಿ ನೋಡಿಗೊಳೆಕ್ಕು. ಮಾಣಿಗೆ ಎಂತ ಆರೈಕೆ ಬೇಕಾರೂ ಆ ಕೂಸು ನೋಡಿಗೊಳೆಕ್ಕು. ಪರಸ್ಪರ ಅವರ ಒಳವೇ ಪ್ರೇಮ ಬರೆಕ್ಕು, ಪ್ರೀತಿ ಬರೆಕ್ಕು, ಸರಸ-ವಿರಸ, ಕೋಪ, ಕ್ರೋಧ - ಎಲ್ಲವುದೇ.
ಪರಸ್ಪರ ಅವರದ್ದೇ ಅನುಭಾವ.

ಮದುವೆ ಮಾಡ್ಳೆ ಕಾನೂನು ಅಡ್ಡ ಬತ್ತರೂ, ಮಾಣಿ-ಕೂಸು ನಿಗಂಟಾದರೂ ಮಾಡ್ಳಕ್ಕನ್ನೇ?
ಭವಿಷ್ಯವೇ ರೂಪಿತ ಆಯೆಕ್ಕಷ್ಟೆ ಹೇಳಿ ಆದ ಮತ್ತೆ ಯೇವ ಮಾಣಿ ಆದರೆ ಎಂತಾತು?
ಎರಡೂ ಮಾವನ ಮನೆ ಸೇರಿ ಮಕ್ಕಳ ಬೆಳೆಶಿರೆ ಆತು.
ಸೋಪ್ಟುವೇರೂ ಅಕ್ಕು, ಪುರೋಹಿತರೂ ಅಕ್ಕು. ಬಾಲ್ಯ ಎರಡೂ ಒಂದೇ ತಾನೇ!!?
’ಕೂಸು ಒಪ್ಪುತ್ತಿಲ್ಲೆ’ ಹೇಳಿ ಅಂತೇ ಹೇಳಿಗೊಂಡು ಬಪ್ಪ ಅತ್ತೆಕ್ಕೊಗೆ, ಮಾವಂದ್ರಿಂಗೆ ಎಲ್ಲ ಯೋಚನೆ ಮಾಡೆಕ್ಕಾದ ಕಾಲ.
ಕೂಸು ಒಪ್ಪುತ್ತು. ಏನೂ ಇಲ್ಲದ್ದ ಬಳೆ ಅಂಗುಡಿಯ ಚೆಕ್ಕನ ಒಪ್ಪಿದ್ದಡ, ಇನ್ನು ಕೃಷಿನೋಡಿಗೊಂಡು ನೆಮ್ಮದಿಲಿ ಇಪ್ಪ ಶುದ್ಧ ಮಾಣಿಯ ಒಪ್ಪದಾ?
ಕೂಸಿನ ಒಪ್ಪುಸುದು ದೊಡ್ಡ ಕಷ್ಟ ಅಲ್ಲ, ದೊಡ್ಡವರ ಒಪ್ಪುಸುದೇ ಕಷ್ಟ. ಎಂತ ಹೇಳ್ತಿ?

ಒಂದೊಪ್ಪ: ಬೇಲಿ ಗಟ್ಟಿ ಇಲ್ಲದ್ರೆ ಮತ್ತೆ ಕಂಡುದನಗಳ ಬೈವಲಾಗ ಅಡ, ಅಲ್ದಾ?

ಸೂ: ಸಮಾಜದ ಒಳಿತಿಂಗಾಗಿ ನಮ್ಮ ಗುರುಗೊ ಈ ವಿಚಾರದ ಬಗ್ಗೆ ಎಷ್ಟು ಕಾಳಜಿ ತೆಕ್ಕೊಂಡಿದವು ಹೇಳಿರೆ, ಒಂದು ಲೇಖನವೇ ಬರದು ಇಂಟರ್ನೆಟ್ಟಿಲಿ ಹಾಕಿದ್ದವಡ. ನಮ್ಮ ಮಕ್ಕೊ ಓದಲಿ ಹೇಳಿಗೊಂಡು. ಸುಮಾರು ಜೆನ ಓದಿ ಅದಕ್ಕೆ ಪ್ರತಿಕ್ರಿಯೆ ಕೊಟ್ಟಿದವಡ. ನಿಂಗಳೂ ಕೊಟ್ಟಿರಾ?