ಎಪ್ರಿಲ್ ಒಂದು : ಹೆಬಗ° & ಉಷಾರಿ - ನಮ್ಮೊಳ ಇಪ್ಪ ಇಬ್ರಿಂಗೂ ಕುಶಿ ಅಪ್ಪ ದಿನ

ಎಪ್ರಿಲ್ ಬಂದಕೂಡ್ಲೇ ಎಲ್ಲೋರಿಂಗೂ ಕುಶಿ - ಮೂರ್ಖರ ದಿನ ಹೇಳಿ.
ಕಳುದ ವರ್ಷ ಆರಾರು ನವಗೆ ಮಾಡಿದ್ದರ ನೆಂಪು ಮಾಡಿ, ಅದರ ಇನ್ನೊಬ್ಬನ ಮೇಲೆ ಪ್ರಯೋಗ ಮಾಡುವ ದಿನ. :-). ಹತ್ತರಾಣವರ ಫೂಲ್ ಮಾಡಿ, ಕೆಮಿಗೆ ಫೂಲ್ ಮಡಗಿ , ಉಷಾರಿ ಮಾಣಿ ಅಪ್ಪ ದಿನ. ಒಬ್ಬನ ಮೂರ್ಖ ಮಾಡಿ ಮತ್ತೆ ಅದರ ಇನ್ನೊಬ್ಬನತ್ರೆ ಹೇಳಿ ಮೀಸೆ ತಿರ್ಪುವ ದಿನ.

ಹಾಂಗೆ ಹೇಳ್ತರೆ ಎರಡು ರೀತಿಲಿಯೂ ನವಗೆ ಕುಶಿಯೇ ಅಪ್ಪದು.
ನಮ್ಮ ಮಂಗ ಮಾಡಿ , ಹೆಬಗ ಆದರೂ, ನಾವು ಇನ್ನೊಬ್ಬರ ಮಂಗ ಮಾಡಿ ಗಟ್ಟಿಗ ಆದರೂ, ಅಪ್ಪದು ಕುಶಿಯೇ ನವಗೆ, ಅಪ್ಪನ್ನೆ!

ನಿಜವಾಗಿ ನೋಡಿರೆ ಹೆಬಗ° /ಹೆಡ್ಡ° / ಪೆದ್ದ° ಹೇಳಿರೆ ಆರು? ಉಷಾರಿಗೊ ಹೇಳಿರೆ ಆರು ಭಾವ ?
ಒಬ್ಬಂಗೆ ತಾನು ಹೆಡ್ಡ ಹೇಳಿ ಗೊಂತಾದರೆ, ಅವ° ಮತ್ತೆ ಹೆಡ್ಡ ಅಲ್ಲ. ಹಾಂಗೇ, ಒಬ್ಬಂಗೆ ಅವ° ಉಷಾರಿ ಹೇಳಿ ತಲಗೆ ಬಂದು ಕೂದರೆ ಅವ° ಖಂಡಿತ ಉಷಾರಿ ಅಲ್ಲ , ಹೇಳಿ ಒಪ್ಪಣ್ಣನ ಅಜ್ಜ° ಹೇಳುಗು. :-)
ಅಪ್ಪಲ್ದೋ?

ಇಂದ್ರಾಣ ದಿನ ನಾವು ಹೆಡ್ಡ° ಆಗಿ ಹೆಡ್ಡ° ಅಲ್ಲ ಹೇಳಿ ಅರ್ಥ ಮಾಡಿಗೊಂಬ°. ಅಲ್ದೋ?

ಒಂದೊಪ್ಪ: ಆದರೂ, ಇಂದು ಎಷ್ಟು ಜನ ನಿಂಗಳ ಮಂಗ ಮಾಡಿದವು ಬಾವ ? ;-)