ಹಂಸ ನೀರಿಲಿಪ್ಪ ಹಾಂಗೆ ನಾವು ಭೂಮಿಲಿರೆಕ್ಕು : ಒಪ್ಪಣ್ಣನ ಅಜ್ಜ

ನಮ್ಮ ಪರಿಸರದ ಕೆಲವು ಜೀವಿಗಳ, ವಸ್ತುಗಳ ಎಲ್ಲ ಉದಾಹರಣ ಮನುಷ್ಯನ ಜೀವನಕ್ಕೆ ಹೊಂದಿಕೆ ಅಪ್ಪ ಹಾಂಗೆ ಅಜ್ಜಂದ್ರು ಕಥೆ ಹೇಳುಗು. ಅದರಿಂದ ನವಗೆ ನೀತಿ ನೆಂಪುದೇ ಒಳಿತ್ತು, ಆ ಪ್ರಾಣಿಗಳೂ ಮನಸ್ಸಿಂಗೆ ಹತ್ತರೆ ಆವುತ್ತು. ಅಲ್ದೋ? ಮನೆಲಿ ಅಜ್ಜ ಒಂದೊಂದರಿ ಹೇಳುಗು, ಹಂಸ ಇಲ್ಲೆಯೋ, ಅದು ನೀರಿಲಿ ಇಪ್ಪ ಹಾಂಗೆ ನಾವು ಭೂಮಿಲಿ ಇರೆಕ್ಕೂಳಿ.

ಇದರ ತಾತ್ಪರ್ಯ ಎಂತರ ಹೇಳಿತ್ತು ಕಂಡ್ರೆ: ಹಂಸವ ದೂರಂದ ನೋಡುವಗ ತುಂಬಾ ಆರಾಮಲ್ಲಿ, ಶುಭ್ರ-ಗಂಭೀರವಾಗಿ ನೀರಿಲಿ ತೆಲಿಗೊಂಡು ಹೋದ ಹಾಂಗೆ ಕಾಣ್ತು. ನೋಡುವವಕ್ಕೆ ಆನಂದ ಆವುತ್ತು. ವಾವ್- ಹಂಸ ದಷ್ಟು ಆರಾಮ ಜೀವಿ ಆರೂ ಇಲ್ಲೆ - ನೆಮ್ಮದಿಲಿ ಬದುಕ್ಕುವ ಜೆನಂಗ ಆರೂ ಇಲ್ಲೆ ಹೇಳಿ ಕಾನ್ತ ಹಾಂಗೆ.
ಆದರೆ, ನೀರಿನ ಅಡಿಲಿ ಮಾಂತ್ರ, ಅದರ ಎರಡು ಪಾದವ ರಪ-ರಪ-ರಪ ಆಡುಸಿಗೊಂಡು ಅದರ ದೇಹವ ಬೇಕಾದ ಹಾಂಗೆ ಸಮತೋಲನಲ್ಲಿ ತೆಕ್ಕೊಂಡು ಹೊಪಲೆ ಇನ್ನಿಲ್ಲದ್ದ ಕೆಲಸ ಮಾಡ್ತು. ಮೇಲೆ ನಿಂದು ನೋಡುವ ಆರಿಂಗೂ ಅದರ ನೀರಿನ ಒಳಾಣ ಕಷ್ಟ ತೋರ್ಸಿಗೊಳ್ತಿಲ್ಲೆ . ಕಾಂಬ ಎಲ್ಲೋರಿಂಗೂ ಚೆಂದಕ್ಕೆ ಮೋರೆ ತೋರ್ಸಿಗೊಂಡು, ತಾನು ಬಯಂಕರ ಸುಖಲ್ಲಿ ಇದ್ದೆ ಹೇಳ್ತ ಹಾಂಗೆ ಬದುಕ್ಕುತ್ತು. ಕೆಲವು ಮನುಷ್ಯರುದೆ ಹಾಂಗೆಯೇ, ತುಂಬಾ ನೆಗೆ ನೆಗೆ ಮಾಡಿಗೊಂಡು ಎಲ್ಲೋರತ್ರೂ ಮಾತಾಡಿಗೊಂಡು ಇರ್ತವಲ್ದ? ಅವರ ಮನೆ / ಮನಸ್ಸಿನ ಒಳ ದೊಡ್ಡ ಪ್ರಳಯವೇ ಆದರೂ ತೊರ್ಸಿಗೊಲ್ತವಿಲ್ಲೆ. ಹಾಂಗೆ ಇರೆಕ್ಕುದೆ.

ಸಣ್ಣ ತಲೆಬೇಶಿ ಆದರೂ ಮನೆಲಿ ಎಲ್ಲೋರಿಂಗೂ ಬೈಕ್ಕೊಂದು, ಸಿಕ್ಕಿದವರತ್ರೆ ಪೂರಾ ಜಗಳ ಮಾಡಿಯೊಂಡು ಸಂಬಂಧ ಹರ್ಕೊಂಡು ಇಪ್ಪವಕ್ಕೆ ಅರ್ಥ ಅಪ್ಪಲೆ ಇದರಿಂದ ಒಳ್ಳೆ ಗಾದೆ ಬೇರೆ ಇಕ್ಕೋ?
ಅಲ್ದಾ ?

ಒಂದೊಪ್ಪ: ನಮ್ಮ ಕೋಪ ಯಾವಗ್ಲೂ ಹತ್ರಾನವರ ಮೇಲೆ ತೋರ್ಸುದು, ಅಪ್ಪೋ ಅಲ್ದೋ?